logo

ಬ್ಯಾಡಗಿ ಉಚಿತ ಬಂಜೆತನ ನಿವಾರಣೆ ಸಮಾಲೋಚನೆ & ತಪಾಸಣಾ ಶಿಬಿರ

ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ ಮತ್ತು ಕಡ್ಲಿ ನಿಂಗಮ್ಮ ಮೆಮೋರಿಯಲ್ ಹಾಸ್ಪಿಟಲ್ ಕಡ್ಲಿ ಐ ವಿ ಎಫ್ ಸೆಂಟರ್ ದಾವಣಗೆರೆ ಇವರ ಸಹಯೋಗದಲ್ಲಿ ಉಚಿತ ಬಂಜೆತನ ನಿವಾರಣ ಸಮಾಲೋಚನೆ ಶಿಬಿರವನ್ನು ಬ್ಯಾಡಗಿ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರ ಪಿ ಎಲ್ ಡಿ ಬ್ಯಾಂಕ್ ಎದುರಿಗೆ ಬ್ಯಾಡಗಿಯಲ್ಲಿ ದಿನಾಂಕ 13.3.2024ನೇ ಬುಧವಾರ ಬೆಳಗ್ಗೆ 10.30 ರಿಂದ ಏರ್ಪಡಿಸಲಾಗಿದೆ. ಈ ಉಚಿತ ಬಂಜೆತನ ನಿವಾರಣ ಸಮಾಲೋಚನೆ ಶಿಬಿರದಲ್ಲಿ ಜರ್ಮನ್ ರಿಟರ್ನ್ ಖ್ಯಾತ ತಜ್ಞ ವೈದ್ಯರಾದ ಡಾ. ವರದಾ ಕಿರಣ್, ಕಡ್ಲಿ ಐವಿಎಫ್ ಸೆಂಟರ್ ದಾವಣಗೆರೆ ಇವರು ಉಚಿತವಾಗಿ ಸಮಾಲೋಚನೆ ಹಾಗೂ ತಪಾಸಣೆ ನಡೆಸಲಿದ್ದಾರೆ. ಕಾರಣ ಬ್ಯಾಡಗಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಬ್ಯಾಡಗಿ ತಾಲೂಕಿನ ಎಲ್ಲಾ ಗ್ರಾಮಗಳ ಮಕ್ಕಳಾಗದ ದಂಪತಿಗಳು ಹಾಗೂ ಒಂದು ಮಗುವಿನ ನಂತರ ಮಕ್ಕಳಾಗದೆ ಮತ್ತೊಂದು ಮಗುವನ್ನು ಬಯಸುವ ದಂಪತಿಗಳು ಈ ಉಚಿತ ಶಿಬಿರದ ಲಾಭ ಪಡೆದುಕೊಳ್ಳಲು ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ ಅವರು ಈ ಪ್ರಕಟನೆ ಮೂಲಕ ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ 7975370979, 9449835764, 8310051589, 9480461444 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಲು ಕೋರಿದ್ದಾರೆ

2
270 views